ಒಂದು ದೊಡ್ಡ ಬೀಟ್ರೂಟ್ ಕತ್ತರಿಸಿ ಮಿಕ್ಸಿ ಮಾಡಿ ಬಾಣಲೆ ಹಾಕಿ ನೀರು ಹೋಗುವರೆಗೂ ಕೈಯಾಡಿಸಬೇಕು. ನಂತರ ಈ ಬೀಟ್ರೂಟ್ ಪೇಸ್ಟನ್ನು ಒಂದು ತಟ್ಟೆಗೆ ಹಾಕಿ ಅದಕ್ಕೆ ಒಂದು ದೊಡ್ಡ ಆಲೂಗೆಡ್ಡೆ ಬೇಯಿಸಿ ತುರಿದಿದ್ದನ್ನು ಸೇರಿಸಿ ಜೊತೆಗೆ ಅರ್ಧ ಗ್ಲಾಸ್ ನಷ್ಟು ಹುರಿದ ಕಡಲೆ ಬೀಜದ ಪುಡಿಯನ್ನು ಹಾಕಬೇಕು.2 ಚಮಚ ಹುರಿದ ಸಾಸಿವೆಯ ಪುಡಿ, ಗರಂ ಮಸಾಲ 1ಚಮಚ, ಸ್ವಲ್ಪ ಚಿಕ್ಕದಾಗಿ ಕತ್ತರಿಸಿದ ಶುಂಠಿ, ನಾಲ್ಕರಿಂದ ಐದು ಹಸಿರು ಮೆಣಸಿನಕಾಯಿ ಚಿಕ್ಕದಾಗಿ ಕತ್ತರಿಸಿದ್ದು. ಕೊತ್ತಂಬರಿ ಸೊಪ್ಪು ಸ್ವಲ್ಪ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಪಾತಿ ಹಿಟ್ಟಿನ ಹದದಲ್ಲಿ ಕಲಿಸುವಾಗ ಬ್ರೆಡ್ ಪೌಡರ್ ಹಾಕಿಕೊಂಡು ಕಲಸಿಕೊಳ್ಳಬೇಕು. ( ಬ್ರೆಡ್ಡಿನ ಸೈಟ್ ಭಾಗಗಳನ್ನು ತೆಗೆದು ಬಿಳಿ ಭಾಗವನ್ನು ಮಾತ್ರ ಮಿಕ್ಸಿಯಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಬೇಕು ) ಚಪಾತಿ ಹದಕ್ಕೆ ಕಲಸಿದ ಮಿಶ್ರಣವನ್ನು ಗೋಲಾಕಾರ ಮಾಡಿ ಕೈಯಲ್ಲಿ ತಟ್ಟಿ ಒಂದು ತಟ್ಟೆಯಲ್ಲಿ ಬ್ರೆಡ್ ಪುಡಿ ಅರಡಿಕೊಂಡು ಅದರಲ್ಲಿ ಇದನ್ನು ರೋಲ್ ಮಾಡಿ ( ಸ್ಟಫ್ ಮಾಡಿ ) ನಂತರ ತವಾದಲ್ಲಿ ತುಪ್ಪ ಅಥವಾ ಎಣ್ಣೆ ಹಾಕಿ ರೋಸ್ಟ್ ಮಾಡಿಕೊಂಡು ಪುದಿನಾ ಚಟ್ನಿ ಟೊಮೆಟೊ ಸಾಸ್ ಗಳ ಜೊತೆಯಲ್ಲಿ ಸವಿಯಲು ರುಚಿಕರವಾಗಿ ಕಟ್ಲೆಟ್ ಸಿದ್ಧವಾಗುತ್ತದೆ. ಯಾವುದೇ ಕೆಮಿಕಲ್ ಬಳಸದೆ ಮನೆಯಲ್ಲಿಯೇ ರುಚಿಕರ ಆರೋಗ್ಯಕರವಾಗಿ ಮಾಡಿ ಮಕ್ಕಳಿಗೆ ಬಡಿಸುವ ಈ ಖಾದ್ಯ ಆರೋಗ್ಯ ವೃದ್ಧಿಸುತ್ತದೆ ಬೀಟ್ರೂಟ್ ಹೃದಯದ ಗೆಳೆಯ.
ವನಿತಾ ಚಂದ್ರಮೋಹನ್ ಕೊಡಗು..