ಭಾನುವಾರ, ಜುಲೈ 5, 2026
admin_panel_settings settings
share

Kaveri News Logo E-News

Kannada & English Editorial Portal

Kaveri News Logo

ಒಮನ್‌ ಕರಾವಳಿಯಲ್ಲಿ ʻಗ್ಯಾಲಕ್ಸಿʼ ಮೇಲೆ ದಾಳಿ – ಓರ್ವ ಭಾರತೀಯ ಮಿಸ್ಸಿಂಗ್‌, 10 ಜನರ ರಕ್ಷಣೆ ಟೆಹ್ರಾನ್‌: ಹಾರ್ಮುಜ್‌ ಜಲಸಂಧಿಯ (Strait of Hormuz) ಒಮನ್‌ ಕರಾವಳಿಯಲ್ಲಿ ʻಜೆಎಫ್‌ಎಸ್‌ ಗ್ಯಾಲಕ್ಸಿʼ ಎಂಬ ವಾಣಿಜ್ಯ ಹಡಗಿನ ಮೇಲೆ ಇರಾನ್‌ ದಾಳಿ ನಡೆಸಿದ್ದು, ಓರ್ವ ಭಾರತೀಯ ನಾಪತ್ತೆಯಾಗಿದ್ದಾರೆ. 10 ಜನರನ್ನ ರಕ್ಷಿಸಲಾಗಿದೆ.

Kaverinews | Published on: | Views: 50
ಅಂತರಾಷ್ಟ್ರೀಯ
ಒಮನ್‌ ಕರಾವಳಿಯಲ್ಲಿ ʻಗ್ಯಾಲಕ್ಸಿʼ ಮೇಲೆ ದಾಳಿ – ಓರ್ವ ಭಾರತೀಯ ಮಿಸ್ಸಿಂಗ್‌, 10 ಜನರ ರಕ್ಷಣೆ ಟೆಹ್ರಾನ್‌: ಹಾರ್ಮುಜ್‌ ಜಲಸಂಧಿಯ (Strait of Hormuz) ಒಮನ್‌ ಕರಾವಳಿಯಲ್ಲಿ ʻಜೆಎಫ್‌ಎಸ್‌ ಗ್ಯಾಲಕ್ಸಿʼ ಎಂಬ ವಾಣಿಜ್ಯ ಹಡಗಿನ ಮೇಲೆ ಇರಾನ್‌ ದಾಳಿ ನಡೆಸಿದ್ದು, ಓರ್ವ ಭಾರತೀಯ ನಾಪತ್ತೆಯಾಗಿದ್ದಾರೆ. 10 ಜನರನ್ನ ರಕ್ಷಿಸಲಾಗಿದೆ.
ವಾಣಿಜ್ಯ ಹಡಗಿನ ಮೇಲಿನ ಈ ದಾಳಿಯನ್ನು ಭಾರತ ಖಂಡಿಸಿದೆ. ಈ ಕುರಿತು ಎಕ್ಸ್‌ ಖಾತೆಯಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ (Randhir Jaiswal), ಪೋಸ್ಟ್‌ ಹಂಚಿಕೊಂಡಿದ್ದಾರೆ.

ವಾಣಿಜ್ಯ ಹಡಗಿನ ಮೇಲಿನ ಈ ದಾಳಿಯನ್ನು ಭಾರತ ಖಂಡಿಸಿದೆ. ಈ ಕುರಿತು ಎಕ್ಸ್‌ ಖಾತೆಯಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ (Randhir Jaiswal), ಪೋಸ್ಟ್‌ ಹಂಚಿಕೊಂಡಿದ್ದಾರೆ. ʻಇಂದು ಮುಂಜಾನೆ ಓಮನ್ ಕರಾವಳಿಯಲ್ಲಿ ವಾಣಿಜ್ಯ ಹಡಗು ಜಿಎಫ್‌ಎಸ್ ಗ್ಯಾಲಕ್ಸಿಯ (GFS Galaxy) ಮೇಲೆ ನಡೆದಿರುವ ದಾಳಿಯನ್ನು ನಾವು ಖಂಡಿಸುತ್ತೇವೆ. ಹಡಗಿನಲ್ಲಿದ್ದ 11 ಭಾರತೀಯ ಪ್ರಜೆಗಳಲ್ಲಿ ಇಲ್ಲಿಯವರೆಗೆ 10 ಜನರನ್ನು ರಕ್ಷಿಸಲಾಗಿದೆ. ಆದರೆ ಓರ್ವ ಭಾರತೀಯ ಪ್ರಜೆ ಕಾಣೆಯಾಗಿರುವುದಾಗಿ ತಿಳಿದುಬಂದಿದೆ ತಿಳಿಸಿದ್ದಾರೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಸಚಿವಾಲಯವು ಒಮನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ. ಒಮನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿದೆ. ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ. ಒಮನ್ ಅಧಿಕಾರಿಗಳ ಬೆಂಬಲಕ್ಕಾಗಿ ನಾವು ಅವರಿಗೆ ಧನ್ಯವಾದ ಹೇಳುತ್ತೇವೆ ಎಂದು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಉದ್ವಿಗ್ನತೆ ಕಡಿಮೆ ಮಾಡಲು ಭಾರತ ಕರೆ

ವಾಣಿಜ್ಯ ಹಡಗಿನ ಮೇಲಿನ ದಾಳಿಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಾ, ಉದ್ವಿಗ್ನತೆಯ ಉಲ್ಬಣವನ್ನು ತಕ್ಷಣವೇ ಕಡಿಮೆ ಮಾಡುವಂತೆ ಸಚಿವಾಲಯ ಮನವಿ ಮಾಡಿದೆ. ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳು ತೀವ್ರ ಕಳವಳಕಾರಿಯಾಗಿದೆ. ಉದ್ವಿಗ್ನತೆಯ ಉಲ್ಬಣವನ್ನ ತಕ್ಷಣವೇ ಕಡಿಮೆ ಮಾಡಬೇಕು. ಶಾಂತಿ ಮತ್ತು ಸ್ಥಿರತೆಗೆ ಮರಳಲು ರಾಜತಾಂತ್ರಿಕ ಪರಿಹಾರಕ್ಕಾಗಿ ನಡೆಯುತ್ತಿರುವ ಮಾತುಕತೆಗಳನ್ನು ಶೀಘ್ರವೇ ಮುಕ್ತಾಯಗೊಳಿಸಬೇಕು ಎಂದು ಕರೆ ನೀಡಿದೆ.


ಕದನ ವಿರಾಮ ಅಂತ್ಯಗೊಳಿಸಿ ಅಮೆರಕವು ಇರಾನ್‌ ಮೇಲೆ ಹೊಸ ದಾಳಿಯ ಅಲೆ ಪ್ರಾರಂಭಿಸಿದ ಬಳಿಕ ಈ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತೆ ಹೆಚ್ಚಿದೆ. ಭೂ ಮತ್ತು ಸಮುದ್ರ ಆಧಾರಿತ ಯುದ್ಧ ವಿಮಾನಗಳು, ಡ್ರೋನ್‌ಗಳು ಮತ್ತು ನೌಕಾ ಹಡಗುಗಳಿಂದ ಅಮೆರಿಕ ಪಡೆಗಳು ಇರಾನ್‌ ಮೇಲೆ ಪ್ರಹಾರ ನಡೆಸುತ್ತಿವೆ. ಯುಎಸ್ ಪಡೆಗಳು ಸುಮಾರು 140 ಇರಾನಿನ ಮಿಲಿಟರಿ ಗುರಿಗಳ ಮೇಲೆ ದಾಳಿ ಮಾಡಿದೆ. ಹೀಗಾಗಿ ಇರಾನ್‌ ಕೂಡ ಪ್ರತಿಕಾರಕ್ಕೆ ಇಳಿದಿದ್ದು, ಹಾರ್ಮುಜ್‌ನಲ್ಲಿ ಸರಕು ಸಾಗಣೆಗೆ ಮತ್ತೆ ಅಡ್ಡಿಯುಂಟಾಗುತ್ತಿದೆ

Share this article